ಅಭಿಪ್ರಾಯ / ಸಲಹೆಗಳು

ಲೇವಾದೇವಿಗಾರರು ಮತ್ತು ಗಿರವಿದಾರರು

ಕರ್ನಾಟಕ ಲೇವಾದೇವಿಗಾರರ ಮತ್ತು ಕರ್ನಾಟಕ ಗಿರವಿದಾರರ ಕಾಯ್ದೆ

 

    ಕರ್ನಾಟಕ ಲೇವಾದೇವಿಗಾರರ ಕಾಯ್ದೆ 1961 ಮತ್ತು ಕರ್ನಾಟಕ ಗಿರವಿದಾರರ ಕಾಯ್ದೆ 1961 ಇದು ಲೇವಾದೇವಿಗಾರರ ಮತ್ತು ಗಿರವಿದಾರರ ವ್ಯವಹಾರವನ್ನು ನಿಯಂತ್ತಿಸುವ ದೃಷ್ಟಿಯಿಂದ 29-3-1962 ರಿಂದ ಜಾರಿಗೆ ಬಂದಿದೆ. ಕರ್ನಾಟಕ ಲೇವಾದೇವಿಗಾರರ ನಿಯಮಾವಳಿಗಳು 1965 ದಿನಾಂಕ:23-3-1965 ರಿಂದ ಜಾರಿಗೆ ಬಂದಿರುತ್ತದೆ ಹಾಗೆಯೇ ಕರ್ನಾಟಕ ಗಿರವಿದಾರರ ನಿಯಮಾವಳಿಗಳು 1966 ದಿನಾಂಕ:09-7-1966 ರಿಂದ ಜಾರಿಗೆ ಬಂದಿರುತ್ತದೆ.

      ಯಾವುದೇ ವ್ಯಕ್ತಿಯು ಲೇವಾದೇವಿ ವ್ಯವಹಾರವನ್ನು ಮತ್ತು ಗಿರವಿ ವ್ಯವಹಾರವನ್ನು ನಡೆಸಲು ಉದ್ದೇಶಿಸಿದಲ್ಲಿ ಲೇವಾದೇವಿ ಕಾಯ್ದೆ 1961 ಪ್ರಕರಣ 6 ಮತ್ತು ಗಿರವಿದಾರರ ಕಾಯ್ದೆ 1961 ಪ್ರಕರಣ 4 ರಡಿಯಲ್ಲಿ ಕಡ್ಡಾಯವಾಗಿ ಪರವಾನಿಗಿಯನ್ನು ಪಡೆಯತಕ್ಕದ್ದು. ಸದರಿ ಪರವಾನಗಿಯನ್ನು ಪ್ರತಿ ಐದು ವರ್ಷಕೊಮ್ಮೆ ನವೀಕರಣಗೊಳಿಸತಕ್ಕದ್ದು. ಮತ್ತು ಲೇವಾದೇವಿ ವ್ಯವಹಾರವನ್ನು ನಡೆಸುವ ಸ್ಥಳ ಒಂದಕ್ಕಿಂತ ಹೆಚ್ಚಾಗಿರದಿದ್ದರೆರೂ.5000/- ಮತ್ತು ಪ್ರತಿ ಹೆಚ್ಚುವರಿ ಸ್ಥಳ ಒಂದಕ್ಕೆ ರೂ.2500/- ರಂತೆ ಶುಲ್ಕವನ್ನು ಮತ್ತು ಗಿರವಿ ವ್ಯವಹಾರಕ್ಕೆ ಪ್ರತಿ ಸ್ಥಳಕ್ಕೆ 7500/- ರಂತೆ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸತಕ್ಕದ್ದು. ಹಾಗೂ ಹೆಚ್ಚುವರಿ ಸ್ಥಳ ಒಂದಕ್ಕೆ ರೂ.2500/- ರಂತೆ ಶುಲ್ಕ ಪಾವತಿಸತಕ್ಕದ್ದು  ಪರವಾನಗಿಯ ಮಂಜೂರಾತಿಗಾಗಿ ಪ್ರತಿಯೊಬ್ಬ ಲೇವಾದೇವಿದಾರನು, ಅಂಥ ಅರ್ಜಿಯನ್ನು ಸಲ್ಲಿಸುವಾಗ ವ್ಯವಹಾಕನುಗುಣವಾಗಿ ಈ ಕೆಳಗೆ ನಮೂದಿಸಿದ ಕೊಷ್ಠಕದಲ್ಲಿ ನಿರ್ದಿಷ್ಠಪಡಿಸಲಾದ ಮೊಬಲಗನ್ನು ನಿಯನಿಸಿದ ರೀತಿಯಲ್ಲಿ ಸರ್ಕಾರದ ಖಜಾನೆಯಲ್ಲಿ ಠೇವಣಿಯಾಗಿ ಇಡತಕ್ಕದ್ದು. :-

 •   ಒಂದು ವರ್ಷದಲ್ಲಿ ಒಂದು ಲಕ್ಷ ಬಂಡವಾಳ ತೊಡಗಿಸುವವರು ರೂ.5000/-

 •  ಒಂದು ವರ್ಷದಲ್ಲಿ ಒಂದು ಲಕ್ಷ ಮೇಲ್ಪಟ್ಟು ಐದು ಲಕ್ಷಕ್ಕಿಂತ ಕಡಿಮೆ ಬಂಡವಾಳ ತೊಡಗಿಸುವವರು ರೂ.10,000/-

 •  ಒಂದು ವರ್ಷದಲ್ಲಿಐದು ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟು ಮತ್ತು ಹತ್ತು ಲಕ್ಷಕ್ಕಿಂತ ಕಡಿಮೆ ಬಂಡವಾಳ ತೊಡಗಿಸುವವರು ರೂ.25,000/-

 •  ಒಂದು ವರ್ಷದಲ್ಲಿಹತ್ತು ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟು ಬಂಡವಾಳ ತೊಡಗಿಸುವವರು ರೂ.50,000/-

 

ಕ್ರ ಸಂ

ವಿವರ

ಸಂಖ್ಯೆ

1

ಲೇವಾದೇವಿ

5,773

2

ಗಿರವಿ, ಸಂಸ್ಥೆಗÀಳು

7,306

3

ಹಣಕಾಸು ಸಂಸ್ಥೆಗಳು

 8,527

4

ಚೀಟಿ ಸಂಸ್ಥೆಗಳು

1,653

   
   

   

ಇತ್ತೀಚಿನ ನವೀಕರಣ​ : 30-05-2023 11:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080