ಅಭಿಪ್ರಾಯ / ಸಲಹೆಗಳು

ಇತರೆ ಸಹಕಾರ ಸಂಘಗಳು

ವಿವಿಧ ಸಹಕಾರ ಸಂಘಗಳು ಮತ್ತು ಮಂಡಳಿಗಳು:

ರಾಜ್ಯದಲ್ಲಿ ಮಹಿಳಾ ಸಹಕಾರ ಸಂಘಗಳು, ಕೂಲಿಕಾರರ ಸಹಕಾರ ಸಂಘಗಳು, ವಿದ್ಯುಚ್ಛಕ್ತಿ ಸಹಕಾರ ಸಂಘಗಳು, ನೀರು ಬಳಕೆದಾರರ ಸಹಕಾರ ಸಂಘಗಳು, ಮೀನುಗಾರಿಕೆ ಸಹಕಾರ ಸಂಘಗಳು, ಸೋಲಾರ್ ಸಹಕಾರ ಸಂಘಗಳು, ಶಿಕ್ಷಣ, ಆಸ್ಪತ್ರೆ, ಸಾರಿಗೆ, ಮರ ಬೆಳೆಸುವವರ ಮತ್ತು ಹೆಂಡ ಇಳಿಸುವವರ ಸಹಕಾರ ಸಂಘಗಳು ಇತ್ಯಾದಿಗಳಿವೆ.

 

ನೀರು ಬಳಕೆದಾರರ ಸಹಕಾರ ಸಂಘಗಳು :

    ರಾಜ್ಯದಲ್ಲಿ 3651 ನೀರು ಬಳಕೆದಾರರ ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದ್ದು, ಇವುಗಳಲ್ಲಿ 2808 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.ಮಹಿಳಾ ಸಹಕಾರ ಸಂಘಗಳು :

    ರಾಜ್ಯದಲ್ಲಿ 6361 ಮಹಿಳಾ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಇವುಗಳಲ್ಲಿ 5607 ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ.

 

ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘಗಳು :

    ರಾಜ್ಯದಲ್ಲಿ 3 ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘಗಳು ನೋಂದಣಿೆಯಾಗಿದ್ದು, ಇವುಗಳಲ್ಲಿ ಎರಡು ಸಹಕಾರ ಸಂಘಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.  ಗ್ರಾಮೀಣ ವಿದ್ಯುಚ್ಛಕ್ತಿ ಸಹಕಾರ ಸಂಘ ನಿ., ಹುಕ್ಕೇರಿ, ಈ ಸಂಘವು 1969 ರಲ್ಲಿ ನೋಂದಣಿಗೊAಡಿದೆ.  ಪ್ರತಿಯೊಬ್ಬ ವಿದ್ಯುತ್ ಗ್ರಾಹಕನು ಸಂಘದ ಸದಸ್ಯನಾಗಿರುತ್ತಾನೆ. ದಿ:31-01-2021 ರ ಅಂತ್ಯಕ್ಕೆ ಷೇರು ಬಂಡವಾಳವು ರೂ.8.66 ಕೋಟಿಗಳಿದ್ದು, ದುಡಿಯುವ ಬಂಡವಾಳ ರೂ.122.08 ಕೋಟಿಗಳಾಗಿರುತ್ತದೆ. ದಿ: 31-01-2021 ರಲ್ಲಿದ್ದಂತೆ ಇದರಿಂದ 121 ಗ್ರಾಮಗಳು, 17 ಹ್ಯಾಮ್ಲ್ಲೆಟ್ಸ್ಗಳಿಗೆ ವಿದ್ಯುತ್‌ಚ್ಛಕ್ತಿ ನೀಡಿರುತ್ತದೆ ಮತ್ತು ಇದು ಹೆಸ್ಕಾಂ ಸಂಸ್ಥೆಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿದೆ.

 

 ಸಾರಿಗೆ ಸಹಕಾರ ಸಂಘಗಳು :

    ರಾಜ್ಯದಲ್ಲಿ 15 ಸಹಕಾರ ಸಾರಿಗೆ ಸಂಘಗಳು ನೋಂದಣಿಯಾಗಿದ್ದು, ಈ ಪೈಕಿ 09 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಸಾರಿಗೆ ಸಹಕಾರ ಸಂಘ ನಿ., ಕೊಪ್ಪ, ಈ ಸಂಘವು 1991 ರಲ್ಲಿ ನೋಂದಣಿಗೊAಡಿದ್ದು, ದಿನಾಂಕ:31-01-2021 ರ ಅಂತ್ಯಕ್ಕೆ 76 ಬಸ್ಸುಗಳನ್ನು ಹೊಂದಿದೆ ಮತ್ತು 160 ವ್ಯಕ್ತಿಗಳನ್ನು ಸಂಘಗಳ ಸದಸ್ಯರನ್ನಾಗಿ ಹೊಂದಿದೆ.  ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಮಾರ್ಗಗಳ ಶೇಕಡ 55 ರಷ್ಟನ್ನು ಈ ಸಹಕಾರ ಸಂಘವು ನಿರ್ವಹಿಸುತ್ತಿದೆ.

 

 ಮೀನುಗಾರಿಕೆ ಸಹಕಾರ ಸಂಘಗಳು :

     ರಾಜ್ಯದಲ್ಲಿ 822 ಮೀನುಗಾರಿಕೆ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಈ ಪೈಕಿ 601 ಸಂಘಗಳು ಕಾರ್ಯನಿರ್ವಹಿಸುತ್ತಿವೆ.


 ಮರ ಬೆಳೆಸುವವರ ಸಹಕಾರ ಸಂಘಗಳು:

     ರಾಜ್ಯದಲ್ಲಿ 22 ಮರ ಬೆಳೆಸುವವರ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಈ ಪೈಕಿ 10 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.  ಈ ಸಹಕಾರ ಸಂಘಗಳು ಜಿಲ್ಲೆಯಲ್ಲಿ ಅರಣ್ಯ ಪ್ರದೇಶಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿವೆ.


ಕಾರ್ಮಿಕ ಸಹಕಾರ ಸಂಘಗಳು:

      ರಾಜ್ಯದಲ್ಲಿ 98 ಕಾರ್ಮಿಕರ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಈ ಪೈಕಿ 49 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.ಕ್ರೀಡಾ ಉತ್ತೇಜನೆ ಮತ್ತು ಅಭಿವೃದ್ಧಿ ಸಹಕಾರ ಸಂಘ, ಚಂದರಗಿ:

      ಕ್ರೀಡೆಯನ್ನು ಪ್ರೋತ್ಸಾಹಿಸುವುದಕ್ಕಾಗಿ 1983 ರಲ್ಲಿ ಈ ಸಂಸ್ಥೆಯು ನೋಂದಾವಣೆಗೊAಡಿದೆ ಮತ್ತು ಇದೊಂದು ರಾಜ್ಯ ಮಟ್ಟದ ಸಂಸ್ಥೆಯಾಗಿದೆ. ಇದು ವಸತಿ ಕ್ರೀಡಾ ಶಾಲೆಯನ್ನು ಹೊಂದಿದೆ. ದಿನಾಂಕ:31/01/2021 ರ ಅಂತ್ಯಕ್ಕೆ 238 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಸೌಲಭ್ಯಗಳನ್ನು ಒದಗಿಸುತ್ತಿದೆ.  ಈ ಸಂಸ್ಥೆಯು 6 ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ. ಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಶಾಲೆಯನ್ನು ನಡೆಸುತ್ತಿದೆ.ಸಹಕಾರಿ ಆಸ್ಪತ್ರೆಗಳು :

    ರಾಜ್ಯದಲ್ಲಿ 18 ಸಹಕಾರಿ ಆಸ್ಪತ್ರೆಗಳು ನೋಂದಣಿ ಗೊಂಡಿದ್ದು, ಇವುಗಳಲ್ಲಿ 08 ಸಹಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.
ದೊಡ್ಡ ಪ್ರಮಾಣದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಫಗಳು (ಲ್ಯಾಂಪ್ಸ್)  

    ರಾಜ್ಯದಲ್ಲಿ 24 ದೊಡ್ಡ ಪ್ರಮಾಣದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘಗಳು ಕರ‍್ಯ ನಿರ್ವಹಿಸುತ್ತಿವೆ. ಆದಿವಾಸಿಗಳ ಸಾಮಾಜಿಕ ಮತ್ತು ಹಣಕಾಸು ಸ್ಥಿತಿಯನ್ನು ಸುಧಾರಿಸುವ ಧ್ಯೇಯಗಳೊಂದಿಗೆ ಈ ಸಂಘಗಳನ್ನು ನೋಂದಾಯಿಸಲಾಗಿದೆ.

 

ಇತ್ತೀಚಿನ ನವೀಕರಣ​ : 30-05-2023 11:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080