ಅಭಿಪ್ರಾಯ / ಸಲಹೆಗಳು

ಕೃಷಿಯೇತರ ಪತ್ತಿನ ಸಹಕಾರ ಸಂಘಗಳು

ಪಟ್ಟಣ ಬ್ಯಾಂಕ್ ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳು

            ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಕೃಷಿಯೇತರ ಅಗತ್ಯವನ್ನೂ ಪೂರೈಸುವಲ್ಲಿ ಸಹಾಯಕವಾಗಿದೆ. ರಾಜ್ಯದಲ್ಲಿ ಪಟ್ಟಣ ಸಹಕಾರ ಬ್ಯಾಂಕಗಳು ಬ್ಯಾಂಕಿಂಗ್ ವಲಯದಲ್ಲಿ ಮಹತ್ತರ ಅಭಿವೃದ್ದಿ ಸಾಧಿಸಿ ದೇಶದಲ್ಲಿ ಮೂರನೇ ಸ್ಥಾನ ಪಡೆದಿದೆ. ಇದರ ಹೊರತಾಗಿ ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಮತ್ತು ನೌಕರರು ಪತ್ತಿನ ಸಹಕಾರ ಸಂಘಗಳು ಸಹ ಸಾಲ ನೀಡುವಲ್ಲಿ ಗಮನಾರ್ಹ ಪಾತ್ರ ವಹಿಸಿವೆ.

            ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು, ಗೃಹ ನಿರ್ಮಾಣ ಮತ್ತು ಇತರ ಬಳಕೆ ಕುರಿತು ಸಾಲ ನೀಡುತ್ತಿವೆ. ಈ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಸ್ವಯಂ ಅಭಿವೃದ್ಧಿ ಹೊಂದುತ್ತಿದ್ದು ಸರ್ಕಾರದ ಹಣಕಾಸಿನ ನೆರವು ಪಡೆದಿರುವುದಿಲ್ಲ.

 

ಪಟ್ಟಣ ಸಹಕಾರ ಬ್ಯಾಂಕ್‌ಗಳು 31.03.2021(ರ ಅಂತ್ಯಕ್ಕೆ)

ಕ್ರ ಸಂ

ವಿವರ

1

ಪಟ್ಟಣ ಸಹಕಾರಿ ಬ್ಯಾಂಕ್

262 (ಶಾಖೆಗಳು-1,145)

2

ಮಹಿಳಾ ಸಹಕಾರಿ ಬ್ಯಾಂಕ್

24

3

ಸದಸ್ಯರು

25.55 ಲಕ್ಷ

4

ಷೇರು ಬಂಡವಾಳ

1,59,334.42 ಕೋಟಿ

5

ದುಡಿಯುವ ಬಂಡವಾಳ

50,161.42 ಕೋಟಿ

6

ವಿತರಿಸಿರುವ ಸಾಲ

28,112.45 ಕೋಟಿ

ಕೃಷಿಯೇತರ ಪತ್ತಿನ ಸಹಕಾರ ಸಂಘಗಳು

ಕ್ರ ಸಂ

ವಿವರ

1

ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಮತ್ತು ನೌಕರರ ಪತ್ತಿನ ಸಹಕಾರ ಸಂಘಗಳು

4,505 (ಶಾಖೆಗಳು-1,435)

2

ಸದಸ್ಯರು

49.09 ಲಕ್ಷ

3

ಠೇವಣಿ

1,14,799.76 ಕೋಟಿ

4

ಸಾಲ/ಮುಂಗಡ

2,22,482.82 ಕೋಟಿ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಲಿ., ಬೆಂಗಳೂರು.

 • ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ 1965 ರ ನೋಂದಾಯಿಸಲ್ಪಟ್ಟಿದೆ. ಪ್ರಾಥಮಿಕ ಪಟ್ಟಣ ಬ್ಯಾಂಕುಗಳ ಇದರ ಸದಸ್ಯರಾಗಿರುತ್ತಾರೆ..

  ಮುಖ್ಯ ಉದ್ದೇಶಗಳು :

  • ಬ್ಯಾಂಕಿಂಗ್ ಚಟುವಟಿಕೆಯಲ್ಲಿ ಏಕರೂಪತೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಮತ್ತು ಭಾರತದ ರಿಸರ್ವ್ ಬ್ಯಾಂಕ್ ಗಳೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳನ್ನು ಪ್ರತಿನಿಧಿಸುತ್ತಿದೆ. .

  • ಪಟ್ಟಣ ಸಹಕಾರಿ ಬ್ಯಾಂಕ್ ಗಳ ಅಭಿವೃದ್ಧಿ ಮತ್ತು ಬ್ಯಾಂಕುಗಳ ಆಸಕ್ತಿಯನ್ನು ಕಾಪಾಡುವುದು.

  • ಈ ಬ್ಯಾಂಕುಗಳ ತಾಂತ್ರಿಕ ಮತ್ತು ಪ್ರಾಯೋಗಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಸಾಮಾನ್ಯ ವೇದಿಕೆ ಒದಗಿಸುವುದು

  • ಕರ್ನಾಟಕ ಸಹಕಾರ ಅಧಿನಿಯಮ & ನಿಯಮಗಳು , RBI ನಿಬಂಧನೆಗಳು, ಬ್ಯಾಂಕಿಂಗ್ ನಿರ್ವಹಣೆ ಮೈತ್ರಿ ವಿಷಯಗಳಿಗೆ ಸಂಬಂಧಿಸಿದಂತೆ ಸದಸ್ಯರು, ಪದಾಧಿಕಾರಿಗಳು ಮತ್ತು ಈ ಬ್ಯಾಂಕುಗಳ ನೌಕರರಿಗೆ ತರಬೇತಿ ನೀಡವುದು.

  • ಇದರ ಹೊರತಾಗಿ ಮಹಾಮಂಡಳವು, ಬ್ಯಾಂಕ್ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರಕಾಶನಗೊಳಿಸಿತ್ತಿದ್ದು, ನ್ಯಾಯ ಬೆಲೆಯಲ್ಲಿ ಅವುಗಳನ್ನು ಮಾರಾಟ ಮತ್ತು ವಿತರಿಸಲು ಆಸಕ್ತಿ ಹೊಂದಿದೆ.

   

   

ಇತ್ತೀಚಿನ ನವೀಕರಣ​ : 30-05-2023 11:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080