ಅಭಿಪ್ರಾಯ / ಸಲಹೆಗಳು

ಮಾರಾಟ

 

      ಮಾರುಕಟ್ಟೆ ವಲಯ ಎರಡು ಶ್ರೇಣಿ ವ್ಯವಸ್ಥೆಯನ್ನು ಹೊಂದಿದೆ. ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಒಕ್ಕೂಟ ಅಪೆಕ್ಸ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಕೃಷಿ ಸಹಕಾರಿ ಮಾರಾಟ ಸಂಘಗಳು ಪ್ರಾಥಮಿಕ ಹಂತದಲ್ಲಿ ಕಾರ್ಯನಿರ್ವಹಿಸುತ್ತವೆ. ರಾಜ್ಯದ ಎಲ್ಲಾ ತಾಲ್ಲೂಕುಗಳು ತಾಲ್ಲೂಕು ಪ್ರಾಥಮಿಕ ಮಾರಾಟ ಸಹಕಾರ ಸಂಘಗಳನ್ನು ಒಳಗೊಂಡಿವೆ. ಮಾರಾಟ ಸಂಘಗಳು ಸರ್ಕಾರ ಮತ್ತು ಗ್ರಾಮ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪರವಾಗಿ ಆಹಾರ ಧಾನ್ಯಗಳ ಖರೀದಿ ಮಾಡುತ್ತವೆ. ಮತ್ತು ಗ್ರಾಮೀಣ ವಿತರಣಾ ವ್ಯವಸ್ಥೆಯು ಸಹ ಇವುಗಳ ಪ್ರಮುಖ ಚಟುವಟಿಕೆಯಾಗಿದೆ

       ಕರ್ನಾಟಕದಲ್ಲಿ 179 ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳಿವೆ .ಈ ಸಂಘಗಳ ಜೊತೆಗೆ ವಾಣಿಜ್ಯ ಬೆಳೆಗಳಾದಂತಹ ಅಡಕೆ ಮತ್ತಿತರೆ ಬೆಳೆಗಳೊಂದಿಗೆ ವ್ಯವಹರಿಸುವ ಐದು ವಿಶೇಷ ಮಾರಾಟ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ . ಇಂತಹ ಸಹಕಾರ ಸಂಘಗಳ ವಿವಿಧ ಧ್ಯೇಯೋದ್ದೇಶಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ಮತ್ತು ಮಾರಾಟ ವ್ಯವಸ್ಥೆಯನ್ನು ಪುನರ ರಚಿಸಲು ಅನ್ವಯವಾಗುವಂತೆ ಬೆಳಗಾವಿ,ವಿಜಾಪುರ, ಬಳ್ಳಾರಿ, ರಾಯಚೂರು, ಮಂಡ್ಯ, ಹಾವೇರಿ, ಮೈಸೂರು,ಗುಲ್ಬರ್ಗಾ, ಶಿವಮೊಗ್ಗ ,ಹಾಸನ, ಬೀದರ್, ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜಿಲ್ಲಾ ಸಹಕಾರಿ ಮಾರಾಟ ಯೂನಿಯನ್ ಗಳನ್ನು ಸ್ಥಾಪಿಸಲಾಗಿದೆ.

1) ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ನಿ.,

      ರಾಜ್ಯದ ಸಹಕಾರ ಮಾರಾಟ ವ್ಯವಸ್ಥೆಯಲ್ಲಿ ಮಾರಾಟ ಸಂಘಗಳು ಎರಡು ಹಂತದಲ್ಲಿ ಕೆಲಸ ನಿರ್ವಹಿಸುತ್ತಿವೆ. ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ ಬೆಂಗಳೂರು, ಇದು ಶೃಂಗ ಸಂಸ್ಥೆಯಾಗಿ ಮತ್ತು ತಾಲ್ಲೂಕು ಮಟ್ಟದಲ್ಲಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಅ) ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು.,

      ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು. ಈ ಸಂಸ್ಥೆಯು ದಿ:11-11-1943 ರಂದು ಸಹಕಾರ ಸಂಘಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿದೆ. ಪ್ರಾರಂಭದಲ್ಲಿ ಕಾಫೀ ಬೀಜ, ಸಕ್ಕರೆ, ಬಟ್ಟೆ, ಸಿಮೆಂಟು ಮತ್ತು ಇತರೆ ಗ್ರಾಹಕ ವಸ್ತುಗಳನ್ನು ವಿತರಿಸುತ್ತಿತ್ತು. ನಂತರದ ವರ್ಷಗಳಲ್ಲಿ ರೈತರಿಗೆ ಅಗತ್ಯವಾದ ಕೃಷಿ ಪರಿಕರಗಳಾದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಖರೀದಿಸಿ ವಿತರಣೆ ಮಾಡುವುದು ಹಾಗೂ ರೈತರಿಂದ ಕೃಷಿ ಉತ್ಪನ್ನಗಳ ಖರೀದಿಯ ವ್ಯವಹಾರಗಳನ್ನು ನಡೆಸುತ್ತಿದೆ.

      ರಾಜ್ಯದ ರೈತರಿಗೆ ಅವಶ್ಯಕವಾದ ವಿವಿಧ ರಸಗೊಬ್ಬರಗಳನ್ನು ಮತ್ತು ಕ್ರಿಮಿನಾಶಕಗಳನ್ನು ಸಹಕಾರ ಸಂಘಗಳ ಮುಖಾಂತರ ಸಕಾಲದಲ್ಲಿ ಸರಬರಾಜು ಮಾಡುವುದು. ಸರ್ಕಾರದ ಬೆಂಬಲ ಬೆಲೆ ಯೋಜನೆ, ಮಾರುಕಟ್ಟೆ ಮಧ್ಯಂತರ ಪ್ರವೇಶ ಯೋಜನೆಗಳಡಿ ಹಾಗೂ ಸ್ವಂತ ಬಂಡವಾಳದಲ್ಲಿ ರೈತರಿಂದ ವಿವಿಧ ಕೃಷಿ ಉತ್ಪನ್ನಗಳನ್ನು ಖರೀದಿಸುವುದು. ರಾಜ್ಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಗೋದಾಮುಗಳನ್ನು ನಿರ್ಮಿಸಿ ಶೇಖರಣಾ ಸೌಲಭ್ಯವನ್ನು ಒದಗಿಸುವುದು. ಇವು ಮಹಾಮಂಡಳದ ಪ್ರಮುಖ ಕಾರ್ಯಚಟುವಟಿಕೆಗಳು ಆಗಿರುತ್ತವೆ.

      ರಾಜ್ಯದ ರೈತರಿಗೆ ಸಕಾಲದಲ್ಲಿ ರಸ ಗೊಬ್ಬರ ಪೂರೈಕೆ ಮಾಡುವ ಸಲುವಾಗಿ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ರಸಗೊಬ್ಬರ ಕಾಪು ದಾಸ್ತಾನು ಯೋಜನೆಯನ್ನು 2008-09ನೇ ಸಾಲಿನಿಂದ ಅನುಷ್ಟಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ ರೂ.5563.00ಕೋಟಿಗಳ ಮೌಲ್ಯದ 79.65ಲಕ್ಷ ಟನ್ ಗೊಬ್ಬರ ವಹಿವಾಟು ನಡೆಸಲು ಅವಕಾಶವಾಗಿ ಹಾಗೂ ಇದರಿಂದ ಮಹಾಮಂಡಳದ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಾಗಿರುತ್ತದೆ.ಸದರಿ ಯೋಜನೆಯಡಿ 2018-19 ನೇ ಸಾಲಿನಲ್ಲಿ ರಸಗೊಬ್ಬರ ಖರೀದಿಗೆ ಬ್ಯಾಂಕುಗಳ ಮೂಲಕ ರೂ.400.00ಕೋಟಿಗಳ ವರೆಗೆ ಸಾಲ ಪಡೆಯಲು ಮಹಾಮಂಡಲಕ್ಕೆ ಅವಕಾಶ ಕಲ್ಪಿಸಿ ಸರ್ಕಾರವು ಭದ್ರತೆ ನೀಡಿರುತ್ತದೆ. ಮಹಾಮಂಡಳವು ಒಟ್ಟು 451 ಸದಸ್ಯ ಸಂಘಗಳನ್ನು ಹೊಂದಿದ್ದು ಒಟ್ಟು ಷೇರು ಬಂಡವಾಳ ರೂ684.33ಲಕ್ಷ ಷೇರು ಬಂಡವಾಳ ಹಾಗೂ ರೂ.3,57,837.16ಲಕ್ಷಗಳಷ್ಟು ದುಡಿಯುವ ಬಂಡವಾಳ ಹೊಂದಿರುತ್ತದೆ. 2018-19ನೇ ಸಾಲಿನಲ್ಲಿ ರೂ.33,786.14ಲಕ್ಷಗಳಷ್ಟು

ಆ) ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು

       ರಾಜ್ಯದಲ್ಲಿ ಒಟ್ಟು 179 ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವಗಳ ಕಾರ್ಯವ್ಯಾಪ್ತಿ ತಾಲ್ಲೂಕಿನಾದ್ಯಂತ ಇದ್ದು, ತಾಲ್ಲೂಕ ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಮೂಲ ಉದ್ದೇಶವು ರಾಜ್ಯದಲ್ಲಿ ರೈತ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಒದಗಿಸುವ ದೃಷ್ಟಿಯಿಂದ ಅವರ ಕೃಷಿ ಉತ್ಪನ್ನಗಳನ್ನು ಖರೀದಿಸಿ ಸೂಕ್ತ ಮಾರಾಟ ವ್ಯವಸ್ಥೆ ಮಾಡುವುದು. ಕೃಷಿ ಅಗತ್ಯವಾಗಿರುವ ಕೃಷಿ ಉತ್ಪನ್ನಗಳ ಶೇಖರಣೆಗೆ ಗೋದಾಮು ನಿರ್ಮಿಸುವುದು. ಇವುಗಳ ಜೊತೆಗೆ ಸರ್ಕಾರದ ಪಡಿತರ ಆಹಾರ ಯೋಜನೆಯ ಅನುಷ್ಟಾನ, ಸರ್ಕಾರದ ಹಾಸ್ಟೆಲ್ಗಳಿಗೆ ಬಂದಿಖಾನೆಗಳಿಗೆ ಆಹಾರ ಸರಬರಾಜು ಹಾಗೂ ರೈತ ಸದಸ್ಯರಿಗೆ ಬೇಕಾಗುವ ಗೊಬ್ಬರ, ಕೀಟನಾಶ, ಕೃಷಿ ಪರಿಕರಗಳನ್ನು ಪೂರೈಸುವ ಉದ್ದೇಶವಾಗಿರುತ್ತದೆ.

       2018-19ನೇ ಸಾಲಿನ ಅಂತ್ಯದವರೆಗೆ, 179 ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಲ್ಲಿ, 4451 ಸಹಕಾರ ಸಂಘಗಳು ಮತ್ತು 3,07,945 ಬಿಡಿ ಸದಸ್ಯರು ಸದಸ್ಯರಿರುತ್ತಾರೆ. ಇವರುಗಳಿಂದ ಒಟ್ಟು ರೂ.3221.48ಲಕ್ಷಗಳು ಷೇರು ಬಂಡವಾಳ ಇರುತ್ತದೆ. ಈ ಪೈಕಿ ಸರ್ಕಾರದ ಷೇರು ರೂ.1513.37ಲಕ್ಷಗಳು ಇರುತ್ತದೆ. ಒಟ್ಟು ದುಡಿಯುವ ಬಂಡವಾಳ ರೂ.75158.78ಲಕ್ಷಗಳು ಇದ್ದು, ಒಟ್ಟು ವ್ಯಾಪಾರ ವಹಿವಾಟು ರೂ.1,47,173.72 ಲಕ್ಷಗಳು ಇರುತ್ತದೆ.

 

 

ಇತ್ತೀಚಿನ ನವೀಕರಣ​ : 30-05-2023 11:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080