ಅಭಿಪ್ರಾಯ / ಸಲಹೆಗಳು

ಕೈಗಾರಿಕೆ

ಕರ್ನಾಟಕ ರಾಜ್ಯ ಸಹಕಾರ ತೆಂಗಿನ ನಾರಿನ ಮಹಾಮಂಡಳ ನಿ., ಬೆಂಗಳೂರು :


        ಈ ಸಂಸ್ಥೆಯನ್ನು 30.12.1961 ರಲ್ಲಿ ನೋಂದಣಿ ಮಾಡಲಾಗಿದೆ. ಇದರ ಕಾರ್ಯವ್ಯಾಪ್ತಿಯು ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿರುತ್ತದೆ. ೧೧೦ ಪ್ರಾಥಮಿಕ ತೆಂಗಿನ ನಾರಿನ ಸಹಕಾರ ಸಂಘಗಳು ಸದಸ್ಯತ್ವವನ್ನು ಹೊಂದಿರುತ್ತದೆ. ಈ ಮಹಾಮಂಡಳವು ತೆಂಗಿನ ನಾರಿನ ಉತ್ಪಾದನೆ, ಉತ್ಪಾದಿಸಲಾದ ತೆಂಗಿನ ನಾರಿನ ಬಳಕೆಗೆ ಅಗತ್ಯವಿರುವ ಸಿದ್ದ ವಸ್ತುಗಳನ್ನು ತಯಾರಿಸುವುದು, ಸಂಸ್ಕರಣೆ, ಮಾರಾಟ ಹಾಗೂ ಉದ್ಯಮವನ್ನು ವಾಣಿಜ್ಯ ಆಧಾರದಲ್ಲಿ ಸಂಘಟಿತಗೊಳಿಸುವುದು ಮುಖ್ಯ ಉದ್ದೇಶವಾಗಿದೆ.

 

ಕರ್ನಾಟಕ ರಾಜ್ಯ ಉಣ್ಣೆ ಮತ್ತು ಕೈಗಾರಿಕಾ ಸಹಕಾರ ಮಹಾಮಂಡಳ ನಿ., ಬೆಂಗಳೂರು :


        ಈ ಮಹಾಮಂಡಳ ೧೯೫೫ ರಲ್ಲಿ ನೋಂದಣಿಯಾಗಿದ್ದು ಇದರ ಕಾರ್ಯಕ್ಷೇತ್ರವು ರಾಜ್ಯಮಟ್ಟದ್ದಾಗಿರುತ್ತದೆ. ರಾಜ್ಯದಲ್ಲಿನ ಖಾದಿ ಹಾಗೂ ಗ್ರಾಮೋದ್ಯೋಗದ ಪ್ರಮಾಣಪತ್ರ ಹೊಂದಿರತಕ್ಕ ಪ್ರಾಥಮಿಕ ಉಣ್ಣೆ ಸಹಕಾರ ಸಂಘಗಳು ಈ ಮಹಾಮಂಡಳದ ಸದಸ್ಯತ್ವವನ್ನು ಹೊಂದಿರುತ್ತವೆ. ಈವರೆಗೆ ಒಟ್ಟು ೧೪೩ ಪ್ರಾಥಮಿಕ ಸಂಘಗಳು ಸದಸ್ಯತ್ವವನ್ನು ಹೊಂದಿರುತ್ತವೆ. ಮಹಾಮಂಡಳದ ಮೂಲೋದ್ದೇಶ ಸದಸ್ಯ ಉಣ್ಣೆ ಪ್ರಾಥಮಿಕ ಸಂಸ್ಥೆಗಳು ಉತ್ಪಾದಿಸುವ ಕಂಬಳಿಗಳನ್ನು ಖರೀದಿಸಿ ಮಹಾಮಂಡಳದ ಮಾರಾಟ ಮಳಿಗೆಗಳಲ್ಲಿ ಮಾರಾಟ ವ್ಯವಸ್ಥೆ ಮಾಡುವುದು ಹಾಗೂ ನೇಕಾರರಿಗೆ ಸದಾಕಾಲ ಉದ್ಯೋಗಾವಕಾಶವನ್ನು ಉದ್ಯೋಗಾವಕಾಶವನ್ನು ನೀಡಲು ಶ್ರಮಿಸುವುದಾಗಿರುತ್ತದೆ. ಮಹಾಮಂಡಳವು ಕಳೆದ ೩ ವರ್ಷಗಳಲ್ಲಿ ಈ ಕೆಳಕಂಡಂತೆ ಲಾಭ-ನಷ್ಟಗಳಿಸಿರುತ್ತದೆ.

 

ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳ ನಿ., (ಕಾವೇರಿ ಹ್ಯಾಂಡ್ ಲೂಂ) ಬೆಂಗಳೂರು :


                 ಈ ಮಹಾಮಂಡಳ ರಾಜ್ಯದ ಸದಸ್ಯ ಪ್ರಾಥಮಿಕ ಕೈಮಗ್ಗಗಳ ನೇಕಾರರ ಸಹಕಾರ ಸಂಘಗಳ ಸದಸ್ಯರುಗಳು ಕೈಮಗ್ಗಗಳ ಮೂಲಕ ನೇಯ್ಗೆ ಮಾಡಿದ ಹತ್ತಿ ಮತ್ತು ರೇಷ್ಮೆ ಉತ್ಪನ್ನಗಳನ್ನು ಸಂಗ್ರಹಿಸಿ ತನ್ನ ಮಾರಾಟ ಮಳಿಗೆಗಳಿಂದ ಮಾರಾಟ ವ್ಯವಸ್ಥೆ ಮಾಡುವುದರ ಮೂಲಕ ನೇಕಾರರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಿ ಅವರನ್ನು ನಿರಂತರವಾಗಿ ನೇಯ್ಗೆ ಕಸುಬಿನಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಅವರಿಗೆ ಉದ್ಯೋಗ ಒದಗಿಸಿ ಅವರ ಆರ್ಥಿಕ ಅಭಿವೃದ್ದಿಗೆ ಶ್ರಮಿಸುವ ಒಂದು ರಾಜ್ಯ ಮಟ್ಟದ ಸಹಕಾರ ಸಂಸ್ಥೆಯಾಗಿರುತ್ತದೆ
         ಪ್ರಸ್ತುತ ಸಂಸ್ಥೆಯು ೩೯೫ ಪ್ರಾಥಮಿಕ ಕೈಮಗ್ಗಗಳ ನೇಕಾರರ ಸಹಕಾರ ಸಂಘಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿರುತ್ತದೆ. ಅವುಗಳಲ್ಲಿ ೩೫೪ ಹತ್ತಿ ಕೈಮಗ್ಗ ನೇಕಾರರ ಸದಸ್ಯ ಸಂಘಗಳು ಮತ್ತು ೪೧ ರೇಷ್ಮೆ ಕೈಮಗ್ಗಗಳ ನೇಕಾರರ ಸಹಕಾರ ಸಂಘಗಳಿರುತ್ತವೆ.
        ಇವುಗಳಲ್ಲಿ ೩೦ ಸಾವಿರ ನೇಕಾರರ ಸದಸ್ಯರುಗಳು ೨೬೬೦೦ ಕೈಮಗ್ಗಗಳಲ್ಲಿ ತೊಡಗಿಸಿಕೊಂಡು ವಿವಿಧ ರೀತಿಯ ಹತ್ತಿ ಮತ್ತು ರೇಷ್ಮೆ ಉತ್ಪನ್ನಗಳನ್ನು ಮಹಾಮಂಡಳಕ್ಕೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಸರಬರಾಜು ಮಾಡಿ ಅದರಿಂದ ಬರುವ ಆದಾಯದ ಮೇಲೆ ಸುಮಾರು ೨ ಲಕ್ಷ ನೇಕಾರರು ತಮ್ಮ ಜೀವನ ನಿರ್ವಹಣೆಗಾಗಿ ಮಹಾಮಂಡಳವನ್ನು ಆವಲಂಬಿಸಿರುತ್ತಾರೆ. ಮಹಾಮಂಡಳವು ಕಳೆದ ೩ ವರ್ಷಗಳಲ್ಲಿ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. .

ಕರ್ನಾಟಕ ರಾಜ್ಯ ಕೈಗಾರಿಕಾ ಸಹಕಾರ ಸಂಘಗಳ ಮಹಾಮಂಡಳ ನಿ., ಬೆಂಗಳೂರು :


                 ಈ ಮಹಾಮಂಡಳವನ್ನು ದಿನಾಂಕ 24.08. 1993 ರಂದು ನೋಂದಣಿ ಮಾಡಲಾಗಿದೆ. ಇದು ರಾಜ್ಯಮಟ್ಟದ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ. ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರವು ವಿಶಾಲವಾದ ವ್ಯಾಪ್ತಿಯನ್ನು ಹೊಂದಿರುವುದರಿಂದ, ಅವಶ್ಯವಿರುವ ತಾಂತ್ರಿಕ ತಿಳುವಳಿಕೆ, ಸೂಕ್ತ ಮಾರ್ಗದರ್ಶನ ಮತ್ತು ಆರ್ಥಿಕ ನೆರವಿನ ಅಭಾವಗಳಿಂದಾಗಿ ಕೈಗಾರಿಕಾ ಸಹಕಾರ ಸಂಘಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಮಹಾಮಂಡಳವನ್ನು ಸ್ಥಾಪಿಸಲಾಗಿದೆ.

ಕರ್ನಾಟಕ ರಾಜ್ಯ ರೇಷ್ಮೆ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು :


                 ಈ ಮಹಾಮಂಡಳವನ್ನು ರಾಜ್ಯದಲ್ಲಿನ ಎಲ್ಲಾ ರೇಷ್ಮೆ ಬಿಚ್ಚಾಣಿಕೆದಾರರ ಅಭಿವೃಧ್ಧಿಗಾಗಿ ೧೯೫೭ ರಲ್ಲಿ ಸರ್ಕಾರದ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಮಧ್ಯವರ್ತಿಗಳ ಕಾಟದಿಂದ ರೇಷ್ಮೆ ಬಿಚ್ಚಾಣಿಕೆದಾರರಿಗೆ ಆಗುತ್ತಿದ್ದ ಅನ್ಯಾಯ ಮತ್ತು ಅವರಿಂದ ಅನುಭವಿಸುತ್ತಿದ್ದ ಕಿರುಕುಳಗಳಿಂದ ಪಾರಾಗಿಸುವುದು ಹಾಗೂ ಅವರ ಉತ್ಪನ್ನಗಳನ್ನು ನೇರವಾಗಿ ಬಳಕೆದಾರರಿಗೆ ತಲುಪಿಸಿ ಅವುಗಳ ಗುಣಮಟ್ಟವನ್ನಾಧರಿಸಿ ಬೆಲೆ ಸಿಗುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿರುತ್ತದೆ.
         ಪ್ರಸ್ತುತ ೧೭ ಪ್ರಾಥಮಿಕ ರೇಷ್ಮೆ ಬಿಚ್ಚಾಣಿಕೆದಾರರ ಸಹಕಾರ ಸಂಘಗಳು, ರೇಷ್ಮೆ ನೇಕಾರರು, ರೇಷ್ಮೆ ಉತ್ಪನ್ನಗಳ ವ್ಯಾಪಾರಸ್ಥರು ಸದಸ್ಯರಾಗಿರುತ್ತಾರೆ. ಸಂಘವು ಕಳೆದ ೫ ವರ್ಷಗಳಲ್ಲಿ ಸುಮಾರು ೦೬ ಕೋಟಿ ರೂಗಳ ವ್ಯಾಪಾರ ವಹಿವಾಟು ನಡೆಸಿದ್ದು ಇದರಿಂದ ಸುಮಾರು ೦೬ ಲಕ್ಷ ರೂಪಾಯಿಗಳನ್ನು ಸೇವಾ ಶುಲ್ಕವಾಗಿ ಪಡೆದಿದೆ. ಸದಸ್ಯ ಸಂಘಗಳಿಗೆ ಸಂಸ್ಥೆಯು ಸೇವಾ ಶುಲ್ಕ ದಲ್ಲಿ ಶೇಕಡ ೦.೫ ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
        ಕಳೆದ ೨೫ ವರ್ಷಗಳಲ್ಲಿ ಸರ್ಕಾರದಿಂದ ಪಡೆದಿರುವ ಆರ್ಥಿಕ ಸವಲತ್ತು ಮತ್ತು ಇತರೆ ಬಾಬ್ತುಗಳಿಗೆ ಸುಮಾರು ೦೪ ಕೋಟಿ ರೂಪಾಯಿಗಳನ್ನು ಮರುಪಾವತಿಸಬೇಕಾಗಿರುವ ಜವಾಬ್ದಾರಿ ಹೊಂದಿರುತ್ತದೆ. ಮಹಾಮಂಡಳವು ಕಳೆದ ೩ ವರ್ಷಗಳಲ್ಲಿ ಗಳಿಸಿದ ಸೇವಾ ಶುಲ್ಕದ ಮಾಹಿತಿ ಈ ಕೆಳಕಂಡಂತೆ ಇರುತ್ತದೆ.

ಕರ್ನಾಟಕ ರಾಜ್ಯ ಸಹಕಾರ ನೂಲಿನ ಗಿರಣಿಗಳ ಮಹಾಮಂಡಳ ನಿ., ಬೆಂಗಳೂರು :


                 ಈ ಮಹಾಮಂಡಳವು ೧೯೭೪ ರಲ್ಲಿ ನೋಂದಾಯಿಸಲ್ಪಟ್ಟಿದೆ. ಇದರ ಕಾರ್ಯವ್ಯಾಪ್ತಿಯು ರಾಜ್ಯಕ್ಕೆ ಸೀಮಿತವಾಗಿದೆ. ರಾಜ್ಯದ ಎಲ್ಲಾ ಸಹಕಾರಿ ನೂಲಿನ ಗಿರಣಿಗಳು ಈ ಮಹಾಮಂಡಳದ ಸದಸ್ಯತ್ವವನ್ನು ಹೊಂದಿರುತ್ತವೆ. ಒಟ್ಟು ೧೧ ನೂಲಿನ ಗಿರಣಿಗಳಲ್ಲಿ ೪ ಗಿರಣಿಗಳು ಸ್ವಂತ ಬಂಡವಾಳದ ಮೇಲೆ ಮತ್ತು ೨ ಗಿರಣಿಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ. ಉಳಿದ ೩ ಗಿರಣಿಗಳು ಸ್ಥಗಿತಗೊಂಡಿವೆ. ೨ ಸಹಕಾರಿ ಉಣ್ಣೆ ನೂಲಿನ ಗಿರಣಿಯ ಯೋಜನೆಯು ಪ್ರಗತಿಯಲ್ಲಿದೆ.
         ಮಹಾಮಂಡಳವು ಹೊಸದಾಗಿ ನೂಲಿನ ಗಿರಣಿಗಳನ್ನು ಸ್ಥಾಪಿಸಲು, ನವೀಕರಿಸಲು, ರೋಗಗ್ರಸ್ಥ ಗಿರಣಿಗಳನ್ನು ಪುನಃಶ್ಚೇತನಗೊಳಿಸಲು ಯೋಜನಾ ವರದಿಗಳನ್ನು ತಯಾರಿಸುತ್ತದೆ. ಇವುಗಳಿಗೆ ಬೇಕಾದ ಷೇರು ಹಣ ಮತ್ತು ಅವಧಿ ಸಾಲವನ್ನು ಪಡೆಯುವುದಕ್ಕಾಗಿ ಬೇಕಾದ ಅಂಕಿ ಅಂಶಗಳು ಮತ್ತು ಅಂದಾಜು ಪಟ್ಟಿಗಳನ್ನು ತಯಾರು ಮಾಡಿಕೊಡುತ್ತದೆ.
        ಕಾರ್ಯನಿರ್ವಹಿಸುತ್ತಿರುವ ನೂಲಿನ ಗಿರಣಿಗಳಿಗೆ ತಾಂತ್ರಿಕ, ಆರ್ಥಿಕ ಹಾಗೂ ಆಡಳಿತ ತಜ್ಞರನ್ನು ಕಳಿಸಿ ಕಾರ್ಯಾಚರಣೆಯ ಬಗ್ಗೆ ಅಧ್ಯಯನ ಮಾಡಿಸಿ ಅವುಗಳು ಸಮರ್ಪಕವಾಗಿ ಹಾಗೂ ಲಾಭದಾಯಕವಾಗಿ ಕಾರ್ಯನಿರ್ವಹಿಸಲು ಸಲಹೆ/ ಸಹಾಯವನ್ನು ನೀಡುತ್ತಿದೆ. ಮಹಾಮಂಡಳವು ಕಳೆದ ೩ ವರ್ಷಗಳಲ್ಲಿ ಈ ಕೆಳಕಂಡಂತೆ ಲಾಭ-ನಷ್ಟ ಗಳಿಸಿರುತ್ತದೆ.

 

ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ನಿ, ಬೆಂಗಳೂರು :


                 ಈ ಮಹಾಮಂಡಳವನ್ನು೧೯೬೧ ರಲ್ಲಿ ನೋಂದಾಯಿಸಲ್ಪಟ್ಟಿದ್ದು ರಾಜ್ಯಮಟ್ಟದ ಕಾರ್ಯಕ್ಷೇತ್ರವನ್ನು ಹೊಂದಿರುತ್ತದೆ. ಈ ಮಹಾಮಂಡಳಕ್ಕೆ ಒಟ್ಟು ೩೪ ಸಕ್ಕರೆ ಕಾರ್ಖಾನೆಗಳು ಸದಸ್ಯತ್ವ ಹೊಂದಿರುತ್ತವೆ. ಹೊಂದಿರುತ್ತವೆ. ಇವುಗಳಲ್ಲಿ 5 ಕಾರ್ಖಾನೆಗಳನ್ನು ಖಾಸಗೀಕರಣಗೊಳಿಸಲಾಗಿದೆ ಮತ್ತು ಉಳಿದ ಕಾರ್ಖಾನೆಗಳು ಸಹಕಾರಿ ರಂಗದಲ್ಲಿರುತ್ತವೆ.
         ಪ್ರಸ್ತುತ ೧೫ ಕಾರ್ಖಾನೆಗಳು ಸಹಕಾರಿ ರಂಗದಲ್ಲಿ ಮತ್ತು ೦೩ ಕಾರ್ಖಾನೆಗಳು ನಿರ್ಮಾಣ ಹಂತದಲ್ಲಿರುತ್ತವೆ. ೧೦ ಕಾರ್ಖಾನೆಗಳನ್ನು ಸಮಾಪನೆಗೊಳಿಸಿದ್ದು ೦೮ ಕಾರ್ಖಾನೆಗಳನ್ನು ಗುತ್ತಿಗೆ ನೀಡಲಾಗಿದೆ.
        ಕಬ್ಬು ಬೆಳೆಗಾರರು ಸಹಕಾರ ತತ್ವದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿ ಪರಿಣಾಮಕಾರಿಯಾಗಿ ನಡೆಸಲು ಮತ್ತು ಕಾರ್ಖಾನೆಗಳ ವಿಸ್ತರಣೆಯಲ್ಲಿ ಅವಶ್ಯಕತೆಯಿರುವ ತಾಂತ್ರಿಕ, ಹಣಕಾಸು ಹಾಗೂ ಆಡಳಿತಾತ್ಮಕ ಸಹಾಯಕ ನೀಡುವುದು, ಯಂತ್ರೋಪಕರಣಗಳು, ಬಿಡಿ ಭಾಗಗಳು ಮತ್ತು ಕಾರ್ಯಾಚರಣೆಗೆ ಉಪಯುಕ್ತವಾದ ಸಹಾಯ/ಸಲಹೆ ನೀಡುವ ಕಾರ್ಯಚಟುವಟಿಕೆ ಗಳನ್ನು ಹೊಂದಿರುತ್ತದೆ. ಅಲ್ಲದೇ ಕಾರ್ಖಾನೆಗಳ ಪ್ರಸ್ತಾವೆಗಳಿಗೆ ಶೀಘ್ರ ವಿಲೇವಾರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಸಕ್ಕರೆ ನಿರ್ದೇಶನಾಲಯ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಸಂಪರ್ಕ ಸೇವೆ ಒದಗಿಸುತ್ತಿದೆ. ಮಹಾಮಂಡಳವು ಕಳೆದ ೩ ವರ್ಷಗಳಲ್ಲಿ ಈ ಕೆಳಕಂಡಂತೆ ಲಾಭ-ನಷ್ಟ ಗಳಿಸಿರುತ್ತದೆ೨೦೧೦-೧೧ , ೨೦೧೧-೧೨ ಮತ್ತು ೨೦೧೨-೧೩ ರಲ್ಲಿ ಖರ್ಚಿಗಿಂತ ಹೆಚ್ಚಿನ ಆದಾಯವನ್ನು ಹೊಂದಿ ಕ್ರೋಢೀಕೃತ ಖರ್ಚಿನ ಪ್ರಮಾಣವನ್ನು ಶೇ.೫೦ ರಷ್ಟು ಕಡಿಮೆ ಮಾಡಿಕೊಂಡಿರುತ್ತದೆ.

 

 

ಜಿಲ್ಲಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಗಳ ಮಹಾಮಂಡಳ ನಿ., ಬೆಂಗಳೂರು :


                 ಬೆಂಗಳೂರು ಈ ಸಂಸ್ಥೆಯು ೦೬-೦೯-೨೦೦೦ ರಲ್ಲಿ ನೋಂದಣಿಯಾಗಿರುತ್ತದೆ. ಇದರ ಕಾರ್ಯವ್ಯಾಪ್ತಿಯು ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿರುತ್ತದೆ. ಮಹಾಮಂಡಳವು ೨೦ ಜಿಲ್ಲೆಗಳಲ್ಲಿ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಗಳ ಸದಸ್ಯತ್ವವನ್ನು ಹೊಂದಿರುತ್ತದೆ. ಇವುಗಳ ಮುಖಾಂತರ ಆಯಾ ಜಿಲ್ಲೆಯ ಕೈಗಾರಿಕೆಗಳಿಗೆ ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಮಹಾಮಂಡಳದ ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದು, ಈ ಕೆಳಕಂಡಂತೆ ಲಾಭ ಗಳಿಸಿರುತ್ತದೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು :


                 ಇದರ ಕಾರ್ಯಕ್ಷೇತ್ರವು ರಾಜ್ಯಮಟ್ಟದ್ದಾಗಿರುತ್ತದೆ. ೮ ದಶಕಗಳ ಹಿಂದೆ ಸಮಾನ ಮನಸ್ಕರ ಕೂಟವೊಂದು ಸಹಕಾರ ತತ್ವ ಪ್ರಚಾರಕ್ಕಾಗಿ ಹಾಗೂ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಗತ್ಯವಾದ ಶಿಕ್ಷಣ ನೀಡುವ ಉದ್ದೇಶದಿಂದ ೨೭-೦೯-೧೯೨೪ ರಂದು ಸಹಕಾರ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿದೆ.
        ರಾಜ್ಯ ಪುನರ್ ವಿಂಗಡಣಾ ಸಮಯದಲ್ಲಿ ಮೈಸೂರು ರಾಜ್ಯ ಸಹಕಾರ ಯೂನಿಯನ್ ಎಂದು ಪುನರ್ ನಾಮಕರಣ ಮಾಡಲಾಗಿದೆ. ಹಾಗೆಯೇ ೧೯೮೭ ರಲ್ಲಿ ಸರ್ಕಾರಿ ಆದೇಶದನ್ವಯ ೪ ಸಹಕಾರಿ ಸಂಸ್ಥೆಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಎಂದು ರಚಿತವಾಗಿದೆ. ಈ ಮಹಾಮಂಡಳವು ಸದಸ್ಯ ಸಹಕಾರ ಸಂಘ/ಬ್ಯಾಂಕುಗಳಿಂದ ಸಹಕಾರ ಶಿಕ್ಷಣ ನಿಧಿ ರೂಪದಲ್ಲಿ ಜಮಾ ಪಡೆದು ಶಿಕ್ಷಣ ತರಬೇತಿ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತಿದೆ. ಹೀಗಾಗಿ ಈ ಮಹಾಮಂಡಳವು ಲಾಭ ಗಳಿಸುವ ಸಂಸ್ಥೆಯಾಗಿರುವುದಿಲ್ಲ.

 

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ವೈ .ಹೆಚ್ .ಗೋಪಾಲಕೃಷ್ಣ
ಸ. ಸಂ. ಅಪರ ನಿಬಂಧಕರು ( ಕೈಗಾರಿಕೆ & ಹೈನುಗಾರಿಕೆ )
 ,
ದೂರವಾಣಿ ಸಂಖ್ಯೆ :080-22355284,
ಇ-ಮೇಲ್ : addlrcs-indl-ka@nic.in

ರಮೇಶ್. ಹೆಚ್
ಸ. ಸಂ. ಸಹಾಯಕ ನಿಬಂಧಕರು ( ಕೈಗಾರಿಕೆ )
 ,
ದೂರವಾಣಿ ಸಂಖ್ಯೆ :080-22269636/37 Ext : 212 ,
ಇ-ಮೇಲ್ : arcs-indl-ka@nic.in

ರಮೇಶ್.
ಸ. ಸಂ. ಸಹಾಯಕ ನಿಬಂಧಕರು ( ಹೈನುಗಾರಿಕೆ )
 ,
ದೂರವಾಣಿ ಸಂಖ್ಯೆ :080-22269636/37 Ext : 212 ,
ಇ-ಮೇಲ್ : arcs-indl-ka@nic.in

 

ಇತ್ತೀಚಿನ ನವೀಕರಣ​ : 21-02-2022 12:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080