ಅಭಿಪ್ರಾಯ / ಸಲಹೆಗಳು

ವಸತಿ

ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿ., ಬೆಂಗಳೂರು

2020-21 ನೇ ಸಾಲಿನ ಆಖೈರಿಗೆ ರೂ.419.17 ಲಕ್ಷಗಳ ಷೇರು ಬಂಡವಾಳವಿದ್ದು, ಸದರಿ ಸಾಲಿನಲ್ಲಿ ವಸತಿ ಮಹಾಮಂಡಲಕ್ಕೆ ರೂ.16.65 ಲಕ್ಷ ಷೇರು ಮೊಬಲಗು ಸಂಗ್ರಹಣೆಯಾಗಿದ್ದು, ಸಂಘಗಳಿಗೆ ಸಾಲ ತೀರುವಳಿಯಾಗುವ ಸಂದರ್ಭದಲ್ಲಿ ಒಟ್ಟು ರೂ.52.44 ಲಕ್ಷಗಳನ್ನು ವಾಪಸ್ಸು ಮಾಡಲಾಗಿದೆ. ದಿನಾಂಕ:31-01-2022 ಕ್ಕೆ ಸಾಲಾಖೈರಿನಲ್ಲಿ ಸದಸ್ಯ ಸಂಘಗಳಿಂದ ಮತ್ತು ಬಿಡಿ ಸಾಲಗಾರರಿಂದ ಒಟ್ಟು ರೂ.391.51 ಲಕ್ಷಗಳ ಷೇರು ಬಂಡವಾಳ ಇರುತ್ತದೆ. ದಿನಾಂಕ:01-04-2021 ರಿಂದ ದಿನಾಂಕ:31-01-2022 ರವರೆಗೆ ಆಪದ್ಧನ ನಿಧಿ ರೂ.70.66 ಲಕ್ಷಗಳು ಮತ್ತು ನಿಶ್ಚಿತ ಠೇವಣಿ ರೂ.291.32 ಲಕ್ಷಗಳು ಸಂಗ್ರಹವಾಗಿದೆ.


ದಿನಾಂಕ:01-04-2021 ರಿಂದ ದಿನಾಂಕ:31-01-2022 ರ ಅಂತ್ಯದ ವೇಳೆಗೆ ಸಿದ್ಧವಿದ್ದ ಕಾನೂನು, ತಾಂತ್ರಿಕ ಹಾಗೂ ಇತರೆ ಪರಿಶೋಧನೆಯಲ್ಲಿ ಸಮರ್ಪಕವಾಗಿ ಕಂಡು ಬಂದ ಎಲ್ಲಾ ಸಾಲದ ಅರ್ಜಿಗಳಿಗೆ ಸಾಲವನ್ನು ಮಂಜೂರು ಮಾಡಲಾಗಿದೆ. ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಮತ್ತು ನೇರಸಾಲಗಾರರಿಗೆ ಸದರಿ ಸಾಲಿನಲ್ಲಿ ಒಟ್ಟು 13 ಪ್ರಕರಣಗಳಲ್ಲಿ ರೂ.86.30 ಲಕ್ಷಗಳ ಸಾಲವನ್ನು ಮಂಜೂರು ಮಾಡಿದೆ. ಇದರಲ್ಲಿ ಪ್ರಾಥಮಿಕ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಗೃಹ ನಿರ್ಮಾಣಕ್ಕೆ ಒಟ್ಟು 6 ಪ್ರಕರಣಗಳಲ್ಲಿ ರೂ.50.00 ಲಕ್ಷ ಮತ್ತು ಅಭಿವೃದ್ಧಿ/ಬಡಾವಣೆ ಸಾಲಕ್ಕೆ 3 ಪ್ರಕರಣಗಳಲ್ಲಿ ರೂ.18.30 ಲಕ್ಷಗಳನ್ನು ಮಂಜೂರು ಮಾಡಿದೆ. ನೇರ ಸಾಲಗಾರರಿಗೆ ಒಟ್ಟು 4 ಪ್ರಕರಣಗಳಲ್ಲಿ ರೂ.18.00 ಲಕ್ಷಗಳನ್ನು ಮಂಜೂರು ಮಾಡಿದ್ದು, ಇದರಲ್ಲಿ ಅಭಿವೃದ್ಧಿ/ಬಡಾವಣೆ ಸಾಲಕ್ಕೆ 1 ಪ್ರಕರಣಗಳಲ್ಲಿ ರೂ.5.00 ಲಕ್ಷಗಳು ಮತ್ತು ನಿವೇಶನ ಖರೀದಿ ಸಾಲಕ್ಕಾಗಿ 3 ಪ್ರಕರಣಗಳಲ್ಲಿ ರೂ.13.00 ಲಕ್ಷಗಳನ್ನು ಮಂಜೂರು ಮಾಡಲಾಗಿದೆ.


ವಸತಿ ಮಹಾಮಂಡಲದ ಸುಸ್ತಿ ಸಾಲದ ಪ್ರಮಾಣ ಈ ಹಿಂದೆ ಹೆಚ್ಚಿದ್ದು, ಈ ದಿಶೆಯಲ್ಲಿ ವಸೂಲಾತಿಗೆ ಆದ್ಯತೆ ನೀಡಿ ವಸೂಲಾತಿಯಲ್ಲಿ ಗಣನೀಯ ಸಾಧನೆ ಮಾಡಲಾಗಿದೆ. ಸುಸ್ತಿ ಸಾಲದ ಪ್ರಕರಣಗಳನ್ನು ಕಾನೂನಿನಾತ್ಮಕವಾಗಿ ಕ್ರಮವಹಿಸಲಾಗಿದ್ದು, ಸದರಿ ಸಾಲಿನಲ್ಲಿ ರೂ. 861.18 ಲಕ್ಷಗಳ ಸಾಲ ವಸೂಲಾತಿಯಾಗಿದೆ.

 

 

 

ಇತ್ತೀಚಿನ ನವೀಕರಣ​ : 30-05-2023 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080