ಅಭಿಪ್ರಾಯ / ಸಲಹೆಗಳು

ಕೃಷಿ ಪತ್ತು

 

ಸಹಕಾರಿ ಕೃಷಿ ಪತ್ತಿನ ಸಂಸ್ಥೆಗಳ ರಚನೆ 

         ಕೃಷಿ ಸಾಲ ವಿತರಣೆಯಲಿ ಕರ್ನಾಟಕ ರಾಜ್ಯದಲ್ಲಿ ಎರಡು ವಿಧದ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಒಂದು ಅಲ್ಪಾವಧಿ  ಮತ್ತು ಮಧ್ಯಮಾವಧಿ ಸಾಲಕ್ಕೆ ಕುರಿತಂತೆ ಇದ್ದು, ಇನ್ನೊಂದು ದೀರ್ಘಾವಧಿ ಸಾಲ ಸೌಲಭ್ಯಗಳ ಬಗ್ಗೆ ನಿಗಾ ವಹಿಸುತ್ತಿದೆ.

 

 1. ಅಲ್ಪಾವಧಿ ಸಾಲದ ಸಹಕಾರಿ ಸಾಲ ವ್ಯವಸ್ಥೆ (ಎಸ್‌ಟಿಸಿಸಿಎಸ್):

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಮಹಾನಗದ  ಪ್ರದೇಶದಲ್ಲಿ 52 ಶಾಖೆಗಳನ್ನು ಹೊಂದಿದ್ದು, ತನ್ನ ಅಂಗಸAಸ್ಥೆಯಾದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿಬಿ) ಮತ್ತು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ (ಪಿಎಸಿಎಸ್) ಮೂಲಕ ಗ್ರಾಮೀಣ ಮಟ್ಟದಲ್ಲಿ ಅಲ್ಪಾವಧಿ ಸಾಲವನ್ನು ರೈತರಿಗೆ ಮತ್ತು ಇತರರಿಗೂ ವಿತರಿಸುತ್ತಿದೆ.  ರಾಜ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, 818 ಶಾಖೆಗಳನ್ನು ಹೊಂದಿರುತ್ತವೆ,. ರಾಜ್ಯದಲ್ಲಿ ಒಟ್ಟು 5658 ಪ್ರಾಥಮಿಕ ವ್ಯವಸಾಯ ಸಹಕಾರ ಸಂಘಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯನಿರತವಾಗಿವೆ. ಈ ಸಂಸ್ಥೆಗಳು ನಬಾರ್ಡ್ ಮಾರ್ಗಸೂಚಿಯನ್ವಯ ತಮ್ಮ ಮೂಲನಿಧಿಯನ್ನು ಆರ್ಥಿಕವಾಗಿ ಮತ್ತು ಸಂಘಟನಾತ್ಮಕವಾಗಿ ಬಲಪಡಿಸುವ ಪ್ರಕ್ರಿಯೆಯಲ್ಲಿ ವ್ಯಾಪಾರ ಅಭಿವೃದ್ಧಿ ಯೋಜನೆಯನ್ನು (ಬಿ.ಡಿ.ಪಿ) ಸಿದ್ಧಪಡಿಸಿವೆ. ಎಲ್ಲಾ ಜಿಲ್ಲಾ ಬ್ಯಾಂಕುಗಳಿAದ ಅಭಿವೃದ್ಧಿ ಕ್ರಿಯಾ ಯೋಜನೆಯನ್ನು (ಡಿ.ಎ.ಪಿ) ಆಧಾರದ ಮೇಲೆ ರಾಜ್ಯ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಸಹಕಾರ ಸಾಲ ಸಂರಚನೆಯ ಬಲವರ್ಧನೆಗಾಗಿ ನಬಾರ್ಡ್, ರಾಜ್ಯ ಸರ್ಕಾರ ಮತ್ತು ಅಪೆಕ್ಸ್ ಬ್ಯಾಂಕ್ ಜೂನ್ 1995 ರಲ್ಲಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದು ಅದನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿದೆ.       

 

 1. ದೀರ್ಘಾವಧಿ ಕೃಷಿ ಸಾಲ ವ್ಯವಸ್ಥೆ:

ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು (ಕಾಸ್ಕಾರ್ಡ್) ಮತ್ತು 176 ಶಾಖೆಗಳಿರುವ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ತಾಲ್ಲೂಕು ಮಟ್ಟದಲ್ಲಿ ಎರಡು ಹಂತದ ದೀರ್ಘಾವಧಿ ಸಾಲ ನೀಡಿಕೆ ವ್ಯವಸ್ಥೆಯಲ್ಲಿ ಪಾಲ್ಗೊಂಡಿವೆ.  ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು (ನಬಾರ್ಡ್), ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಗೆ ಅವುಗಳು ನೀಡಿದ ಸಾಲದ ಮೇಲೆ ಪುನರ್ಧನವನ್ನು ನೀಡುತ್ತದೆ.

 

 1. ಕೃಷಿ ಸಾಲ ವಿತರಣೆ;

     31-3-2021 ರಲ್ಲಿ ರಾಜ್ಯದಲ್ಲಿನ ಸಹಕಾರಿ ಸಾಲ ವ್ಯವಸ್ಥೆಯ ಮುಖಾಂತರ ಆದ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ವಿತರಣೆಯು ಕ್ರಮವಾಗಿ ರೂ. 16,366.70 ಕೋಟಿ, ರೂ. 957.45 ಕೋಟಿ ಮತ್ತು ರೂ. 411.13 ಕೋಟಿಗಳಾಗಿದ್ದು, ಇದು ಹಿಂದಿನ ಸಾಲಿನ ಮಾರ್ಚ್ ಅಂತ್ಯದಲ್ಲಿದ್ದ ರೂ. 12987.17 ಕೋಟಿ ಅಲ್ಪಾವಧಿ ಸಾಲ, ರೂ. 590.70  ಕೋಟಿ ಮಧ್ಯಮಾವಧಿ ಸಾಲ  ಮತ್ತು ರೂ. 264.63 ಕೋಟಿ ದೀರ್ಘಾವಧಿ ಸಾಲಕ್ಕೆ ಪ್ರತಿಯಾಗಿದೆ. ಎಲ್ಲಾ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಣೆಯಲ್ಲಿ ಗಣನೀಯವಾಗಿ  ಪ್ರಗತಿಯಾಗಿರುತ್ತದೆ

.

 1. ಸಾಲ ವಸೂಲಾತಿ:

     ರಾಜ್ಯದಲ್ಲಿನ ಸಹಕಾರಿ ಸಾಲ ವ್ಯವಸ್ಥೆಯಲ್ಲಿ ಆದ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಸೂಲಾತಿಯಲ್ಲಿನ ತುಲನಾತ್ಮಕ ಸ್ಥಿತಿಯನ್ನು 2018-19 ರಿಂದ 2021-22 ರವರೆವಿಗೆ ಕೋಷ್ಠಕ 7.3.15 ರಲ್ಲಿ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ವಸೂಲಾತಿಗೆ ಹೋಲಿಸಿದಲ್ಲಿ ದೀರ್ಘಾವಧಿ ಸಾಲದ ವಸೂಲಾತಿ ಸಂಖ್ಯೆಯಲ್ಲಿ ಅತಿ ಹೆಚ್ಚು ಬಾಕಿ ಉಳಿದಿದ್ದು, ಇದು ಸಾಲ ವಸೂಲಾತಿಯಲ್ಲಿ ಇಳಿಮುಖವಾಗಿರುವುದು ಕಂಡುಬರುತ್ತದೆ.

 

 

 

 

ಇತ್ತೀಚಿನ ನವೀಕರಣ​ : 30-05-2023 11:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080