ಅಭಿಪ್ರಾಯ / ಸಲಹೆಗಳು

ಸಚಿವಾಲಯ

ಸಹಕಾರ ಇಲಾಖೆಯು ಕ್ಯಾಬಿನೆಟ್ ದರ್ಜೆಯ ಸಚಿವರ ನೇತೃತ್ವದಲ್ಲಿದೆ.

        ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನೆ ಇಲಾಖೆ, ಕೃಷಿ ಮಾರಾಟ ಇಲಾಖೆ ಮತ್ತು ಉಗ್ರಾಣ ನಿಗಮದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ .ಸಹಕಾರ ಇಲಾಖೆಯು ಸಚಿವಾಲಯ ಮಟ್ಟದಲ್ಲಿ ಸಹಕಾರ ವಲಯಕ್ಕಾಗಿ ನೀತಿ ರಚನೆ, ಯೋಜನೆ ಆಯವ್ಯಯ ಮತ್ತಿತರ ಪೂರಕ ಸೇವೆಗಳಿಗೆ ಜವಾಬ್ದಾರಿಯಾಗಿರುತ್ತದೆ .ಇದು ನಿಯಮಗಳನ್ನು ನಿಗದಿಪಡಿಸುತ್ತದೆ ಮತ್ತು ಸಹಕಾರಿ ಸಂಸ್ಥೆಗಳ ಬಲಸಂವರ್ಧನೆಗಾಗಿ ಸ್ಥೂಲ ಮಾರ್ಗಸೂತ್ರಗಳನ್ನು ನೀಡುತ್ತದೆ ಹಾಗೂ ಸಹಕಾರ ಸಂಸ್ಥೆಗಳ ಬೆಳವಣಿಗೆಯನ್ನು ಬಲಪಡಿಸುತ್ತದೆ. ಇದು ಯೋಜನೆ , ಹಣಕಾಸು ಮತ್ತಿತರ ಇಲಾಖೆಗಳೊಂದಿಗೆ ಮತ್ತು ಭಾರತ ಸರ್ಕಾರದೊಂದಿಗೆ ಸಂಪರ್ಕ ಹೊಂದಿರುತ್ತದೆ. ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಮತ್ತು ನಿಯಮಗಳಡಿಯಲ್ಲಿ ಇದು ಮೇಲ್ಮನವಿ ಪ್ರಾಧಿಕಾರ ಆಗಿರುತ್ತದೆ. ಈ ಇಲಾಖೆಗಳ ಅಧಿಕಾರಿಗಳ ಸಂಬಂಧದಲ್ಲಿ ಸರ್ಕಾರವು ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರ ಸಹ ಆಗಿರುತ್ತದೆ. .

ರಾಜ್ಯ ಕೇಂದ್ರ ಸ್ಥಾನ :

         ಸಹಕಾರ ಸಂಘಗಳ ನಿಬಂಧಕರು ಸಹಕಾರ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ .  ಅವರು ಲೇವಾದೇವಿಗಾರರ ಮತ್ತು ಗಿರಿವಿದಾರರ ಮಹಾ ರಿಜಿಸ್ಟ್ರಾರರಾಗಿದ್ದಾರೆ ಅಲ್ಲದೇ ಚೀಟಿ ವ್ಯವಹಾರಗಳ ನಿಬಂದಕರರಾಗಿದ್ದಾರೆ .  ಅವರು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961, ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ಚೀಟಿ ನಿಧಿಗಳ ಅಧಿನಿಯಮ 1982ರ ಅಡಿಯಲ್ಲಿ ಶಾಸನಬದ್ದ ಅಧಿಕಾರಗಳನ್ನು ಚಲಾಯಿಸುತ್ತಾರೆ ದಿನಾಂಕ 07-05-2008 ರಿಂದ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಮಹಾರಿಜಿಸ್ಟಾರರಾಗಿರುತ್ತಾರೆ . ಸಹಕಾರ ಸಂಘಗಳ ರಿಜಿಸ್ಟ್ರಾರರು ಅಪೆಕ್ಸ್ ಬ್ಯಾಂಕ್ , ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮುಂತಾದವುಗಳ ಆಡಳಿತ ಸಮಿತಿಯಲ್ಲಿ ಸರ್ಕಾರಿ ನಾಮಿನಿಯಾಗಿರುತ್ತಾರೆ..

ಇತ್ತೀಚಿನ ನವೀಕರಣ​ : 16-08-2021 05:40 PM ಅನುಮೋದಕರು: Ashwini-ARCS


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080