ಅಭಿಪ್ರಾಯ / ಸಲಹೆಗಳು

ಸಹಕಾರ ಚಳುವಳಿಯ ನೂರು ವರ್ಷಗಳು

 ಸಹಕಾರ ಚಳುವಳಿಯು ಭಾರತದಲ್ಲಿ 1904 ರಲ್ಲಿ ಸಹಕಾರ ಸಂಘಗಳ ಕಾಯ್ದೆ 1904 ನ್ನು ಜಾರಿಗೆ ತರುವುದರೊಂದಿಗೆ ಪ್ರಾರಂಭವಾಗಿದ್ದು, ತದನಂತರ ದೀರ್ಘ ಪ್ರಯಾಣದ ನಂತರ ಅದು ಹೆಚ್ಚು ಆಸೆಗಳೊಂದಿಗೆ ಮತ್ತು ನಿರೀಕ್ಷಣೆಗಳೊಂದಿಗೆ ಹೊಸ ಸಹಸ್ರಮಾನಕ್ಕೆ ಕಾಲಿರಿಸಿದೆ.

       ಕಳದೆ ಶತಮಾನದಲ್ಲಿ ಎರಡು ಚಳುವಳಿಗಳು ಈ ದೇಶದ ಹೆಚ್ಚಿನ ಸಂಖ್ಯೆಯ ಜನ ಸಮುದಾಯದ ಜೀವನದ ಮೇಲೆ ಅಸಾಧರಣ ಪರಿಣಾಮವನ್ನು ಉಂಟು ಮಾಡಿದೆ. ಸ್ವಾತಂತ್ರ ಚಳುವಳಿಯು ಭಾರತವನ್ನು ಪಾರತಂತ್ರ್ಯದಿಂದ ಮುಕ್ತಗೊಳಿಸಿತು. ಶಕ್ತಿಶಾಲಿ ಆರ್ಥಿಕ ಬೆಳವಣಿಗೆಯ ಫಲವನ್ನು ದೇಶವು ಅನುಭವಿಸದೆ ರಾಜಕೀಯ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿರುವುದಿಲ್ಲವೆಂಬುದು ಬೇಗನೆ ಅರಿವಾಯಿತು. ಸ್ವಾತಂತ್ರ್ಯ ಚಳುವಳಿಯು ಜನ ಸಮುದಾಯದ ಚಳುವಳಿಯಾಗಿತ್ತು. ಸಹಕಾರ ಚಳುವಳಿಯೂ ಹಾಗೆಯೇ ಜನಸಮುದಾಯದ ಚಳುವಳಿಯಾಗಿದೆ.

       ಎರಡೂ ಚಳುವಳಿಗಳಲ್ಲಿ ಪ್ರಮುಖವಾಗಿ ಅಡಕವಾಗಿದ್ದ ಅಂಶಗಳೆಂದರೆ ಭಾರತದ ಕೋಟ್ಯಾಂತರ ಜನಗಳ ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರು ಭೂರಹಿತ ಕೃಷಿ ಕಾರ್ಮಿಕರು, ಜನ ಸಮುದಾಯದ ದುರ್ಬಲ ವರ್ಗಗಳು ಅಂದರೆ ಕೈಮಗ್ಗ ನೇಕಾರರು, ಮೀನುಗಾರರು, ಕುಶಲಕರ್ಮಿಗಳು ಇತ್ಯಾದಿ ವರ್ಗದ ಒತ್ತಾಸೆ ಮತ್ತು ಆಕಾಂಕ್ಷೆಗಳೇ ಆಗಿದ್ದವು. ಈ ವರ್ಗಗಳು ಬಡತನದ ಕಷ್ಟ ಕಾರ್ಪಣ್ಯದಿಂದ ನೊಂದವರಾಗಿ ಶತಮಾನಗಳ ಕಾಲ ಆರ್ಥಿಕ ಪ್ರಗತಿಯಿಂದ ಲಭ್ಯವಾಗುವ ಫಲವನ್ನು ಹೊಂದುವಿಕೆಯಿಂದ ವಂಚಿತರಾಗಿದ್ದರು. ಸ್ವಾತಂತ್ರ್ಯ ಚಳುವಳಿಗೆ ಪೂರ್ವದ ಅವಧಿಯು ಬಡಜನರ ಸ್ಥಿತಿಯನ್ನು ಉತ್ತಮಪಡಿಸಲು ನಡೆದ ಜನಪರ ಹೋರಾಟವಾಗಿತ್ತು ಮತ್ತು ಈ ಪ್ರಯತ್ನದಲ್ಲಿ ಸಹಕಾರ ಸಂಸ್ಥೆಗಳು ನಿರ್ಣಾಯಕ ಪಾತ್ರವನ್ನು ವಹಿಸಬೇಕಾಗಿತ್ತು. ಜನ ಸಮುದಾಯದ ಅನೇಕ ವರ್ಗಗಳು ಸಹಕಾರ ಸಂಸ್ಥೆಗಳ ಅಶ್ರಯದ ನೆರಳಿನಡಿಯಲ್ಲಿ ಸಮಾವೇಶಗೊಂಡವು. ಅದು ಹಸಿರು ಕ್ರಾಂತಿಯೇ ಆಗಿರಲಿ (ವ್ಯವಸಾಯ), ಶ್ವೇತ ಕ್ರಾಂತಿಯೇ ಆಗಿರಲಿ (ಹೈನುಗಾರಿಕೆ), ಹಳದಿ (ಕೋಳಿ ಸಾಕಣಿಕೆ) ಮತ್ತು ನೀಲಿ (ಮೀನುಗಾರಿಕೆ) ಕ್ರಾಂತ್ರಿಗಳೇ ಆಗಿರಿಲಿ ಅವುಗಳ ಯಶಸ್ಸು ದೇಶದ ಮೂಲೆ ಮೂಲೆಗಳಲ್ಲಿ ವ್ಯವಸ್ಥಿತವಾಗಿ ಹರಡಿರುವ ಸಹಕಾರ ಜಾಲದ ಮೇಲೆ ಅವಲಂಬಿತವಾಗಿತ್ತು. ರೈತರಿಗೆ ಖಾಸಗಿಯಾಗಿ ಸಾಲ ನೀಡುತ್ತಿದ್ದ ಲೇವಾದೇವಿಗಾರ ಎಂಬ ಪುರಾತನ ಸಂಸ್ಥೆಗಳು ಹಾಗೂ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಬ್ಯಾಂಕಿಂಗ್ ಸಂಸ್ಥೆಗಳ ಬಲದಿಂದ ಮುಗ್ಗರಿಸಿತು. ನಂತರದಲ್ಲಿ ಸಹಕಾರ ಚಳುವಳಿಯು ಪತ್ತೇತರ ಕ್ಷೇತ್ರದ ಬೆಳವಣಿಗೆಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಮುಂದುವರೆಯಿತು.

      20 ನೇ ಶತಮಾನದಲ್ಲಿ 5 ನೇ ದಶಕದಿಂದಲೂ ಪ್ರಾರಂಭಿಸಿ ದೇಶವು ಆರ್ಥಿಕ ಅಭಿವೃದ್ದಿಯ ವ್ಯವಸ್ಥಿತ ರೂಪವನ್ನು ಪಡೆದುಕೊಂಡಿತು ಮತ್ತು ಗುರಿಗಳನ್ನು ಸಾಧಿಸುವುದಕ್ಕಾಗಿ ಸಮ್ಮಿಶ್ರ ಅರ್ಥವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿತು. ಒಂದೆಡೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ನಿರ್ದಿಷ್ಟ ಪಾತ್ರಗಳ ನಿರ್ವಹಣೆಯನ್ನು ವಹಿಸಲಾಯಿತು ಮತ್ತು ಇನ್ನೊಂದೆಡೆ ಇದುವರೆಗೂ ನಿರ್ದಿಷ್ಟವಾದ ಕ್ಷೇತ್ರವೆಂದು ಗುರುತಿಸಲ್ಪಡದೇ ಇದ್ದ ಸಹಕಾರ ಕ್ಷೇತ್ರವು ತನ್ನ ಸ್ವಂತ ಬಲದ ಮೇಲೆ ನಿಲ್ಲಲು ಅರ್ಥವ್ಯವಸ್ಥೆಯಲ್ಲಿ ತನ್ನದೇ ಆದ ನಿರ್ದಿಷ್ಟ ರೂಪವನ್ನು ಗಳಿಸಲು ಸಂಗ್ರಾಮದಲ್ಲಿ ಹೋರಾಟ ನಡೆಸಿತು. ಸಹಕಾರ ಸಂಸ್ಥೆಗಳ ಪ್ರವರ್ಧಮಾನಕ್ಕಾಗಿ ಅವುಗಳ ಅರ್ಥ ವ್ಯವಸ್ಥೆಯಲ್ಲಿ ರಾಜ್ಯವು ಭಾಗವಹಿಸುವುದನ್ನು ಸರ್ಕಾರವು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಖಂಡ ಭಾಗವಾಗಿ ಸೇರ್ಪೆಡೆ ಮಾಡಿತು. ಕೃಷಿ ಅಭಿವೃದ್ಧಿಯು ಸರ್ಕಾರದ ಪ್ರಧಾನ ಕಾರ್ಯದ್ಯಮವಾಯಿತು. ಏರುತ್ತಿರುವ ಕೃಷಿ ಉತ್ಪಾದನೆ ಮತ್ತು ಉತ್ಪಾದನಾ ನಂತರದ ಸೂಕ್ತ ಸೌಲಭ್ಯಗಳನ್ನು ಏರ್ಪಡಿಸಲು ಸಹಕಾರ ಸಂಸ್ಥೆಗಳು ಭಾರಿ ಪ್ರಮಾಣದ ಕಾರ್ಯಕ್ರಮಗಳನ್ನು ಹಾಕಿಕೊಂಡವು. ವಿವಿಧ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ವಿವಿಧ ಕ್ರೇತ್ರಗಳು ಪತ್ತಿನ ಸಹಕಾರ ಚಳುವಳಿಯ ವಿಸ್ತ್ರುತ ಜಾಲದಿಂದ ಸಹಾಯ ಪಡೆದವು.

      ಸಾಲ ಮತ್ತು ಸಾಲೇತರ ಕ್ಷೇತ್ರಗಳಲ್ಲಿ ಸಹಕಾರ ಸಂಸ್ಥೆಗಳು ಅಣಬೆಗಳಂತೆ ಬೆಳೆದಿವೆ. ಸಾಲ ಮತ್ತು ಸಾಲೇತರ ಸಹಕಾರ ಸಂಸ್ಥೆಗಳೆರಡೂ ಸಹ ಪ್ರಾಥಮಿಕ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಹಂತದ ವ್ಯವಸ್ಥೆಯನ್ನು ಹೊಂದಿವೆ. ಅದು ಪ್ರಾಥಮಿಕ, ಮಾಧ್ಯಮಿಕ ಮತ್ತು ನಡುವಣ ಹಂತದ ಕ್ಷೇತ್ರದಲ್ಲಿ ಅರ್ಥ ವ್ಯವಸ್ಥೆಯ ಎಲ್ಲಾ ಕಡೆಗಳಲ್ಲೂ ಸಹಕಾರಿ ಸಂಸ್ಥೆಗಳ ಭಾರಿ ಪ್ರಮಾಣದ ಭಿನ್ನ ರೀತಿಯ ಚಟುವಟಿಕೆಗಳನ್ನು ಹೊಂದಿವೆ. ಇಂದು ಭಾರದಲ್ಲಿ ಸಹಕಾರ ಚಳುವಳಿಯು ವಿಶ್ವದಲ್ಲಿಯೇ ದೊಡ್ಡದಾಗಿದೆ. ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಕೃಷಿ , ತೋಟಗಾರಿಕೆ ಸಾಲ ಮತ್ತು ಬ್ಯಾಂಕಿಂಗ್ ಗೃಹ ನಿರ್ಮಾಣ, ಕೃಷಿ ಕೈಗಾರಿಕೆ, ಗ್ರಾಮೀಣ ವಿದ್ಯುದೀಕರಣ, ನೀರಾವರಿ, ಜಲಸಂರಕ್ಷಣಿ ಕಾರ್ಮಿಕ, ದುರ್ಬಲವರ್ಗ ಗಳು, ಹೈನುಗಾರಿಕೆ, ಗ್ರಾಹಕ ವರ್ಗ . ಸಾರ್ವಜನಿಕ ವಿತರಣಾ ವ್ಯವಸ್ಥೆ, ಗಿರಿಜನಾಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪರ, ರಫ್ತು, ಕೃಷಿ ವ್ಯಾಪರ, ಮಾನವ ಸಂಪನ್ಮೂಲ ಅಭಿವೃದ್ದಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳನ್ನೆಲ್ಲಾ ಸಹಕಾರ ಚಳುವಳಿಯು ಆವರಿಸಿಕೊಂಡಿದೆ.

ಇತ್ತೀಚಿನ ನವೀಕರಣ​ : 13-08-2021 03:22 PM ಅನುಮೋದಕರು: Ashwini-ARCS


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080