ಅಭಿಪ್ರಾಯ / ಸಲಹೆಗಳು

ಸಹಕಾರ ಇಲಾಖೆ

ದೂರದೃಷ್ಟಿ/ಮುನ್ನೋಟ

        ಸದಸ್ಯರು ಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸಹಕಾರ ಸಂಘಗಳ ಬೆಳವಣಿಗೆ, ಸ್ವಾವಲಂಬನೆ, ಸ್ವಾಯತ್ತತೆ ಮತ್ತು ಆರ್ಥಿಕವಾಗಿ ಸಬಲತೆ ಹೊಂದುವಂತೆ ಸಂವರ್ಧನೆಗೊಳಿಸುವುದು ಹಾಗೂ ಉತ್ತೇಜಿಸುವುದು.

ಧ್ಯೇಯ/ನಿರ್ದಿಷ್ಟ ಗುರಿ

1.ಪ್ರಾಮಾಣಿಕ ಸಹಕಾರಿ ಸಂಸ್ಥೆಗಳನ್ನು ಸಂಘಟಿಸಲು ಹಾಗೂ ಸಹಕಾರ ಮೂಲ ತತ್ವಗಳನುಸಾರ ಸಂಸ್ಥೆಗಳನ್ನು ಸುಸ್ಥಿತಿಯ ಮಾರ್ಗ ದಲ್ಲಿ ನಡೆಸಲು ಕ್ರಮವಿಡವುದು.  
2.ರಾಜ್ಯದಲ್ಲಿನ ಸಹಕಾರ ಚಳುವಳಿಯನ್ನು ಅಭಿವೃದ್ಧಿಪಡಿಸಿ, ಜನರ ಆರ್ಥಿಕ ಹಿತಾಸಕ್ತಿ ಮತ್ತು ಕ್ಷೇಮಾಭಿವೃದ್ಧಿ ಉತ್ತಮಪಡಿಸಲು ಮಾರ್ಗ ದರ್ಶನ ನೀಡುವುದು.
3.ಎಲ್ಲಾ ವಿಧದ ಸಹಕಾರಿ ಸಂಸ್ಥೆಗಳಿಗೆ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗ ದರ್ಶಕನಾಗಿ ಸೇವೆ ಮಾಡುವುದು.

ಇಲಾಖೆಯ ಬದ್ದತೆಗಳು

1.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಪಡಿಸಲು ವ್ಯಾಪಾರ ಅಭಿವೃದ್ಧಿ ಪಡಿಸಲು ವ್ಯಾಪಾರ ಅಭಿವೃದ್ಧಿ ಯೋಜನೆಯನ್ನು ಅಳವಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ರೈತರಿಗೆ ಸುಲಭವಾಗಿ ಸಾಲ ತಲುಪಿಸುವ ವ್ಯವಸ್ಥೆಯನ್ನು ಬಲಪಡಿಸುವುದು.
2.ಎಲ್ಲಾ ಗ್ರಾಮೀಣ ಸಹಕಾರಿ ಸಂಸ್ಥೆಗಳ ಎಲ್ಲಾ ಸದಸ್ಯರುಗಳಿಗೆ ಆರೋಗ್ಯ ರಕ್ಷಣಿ ಯೋಜನೆಯನ್ನು ವಿಸ್ತರಿಸುವುದು.
3.ಸಹಕಾರ ಚಳುವ:ಳಿಯಲ್ಲಿ ಮಹಿಳೆಯರು ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ ದವರು ಸಕ್ರಿಯವಾಗಿ ಪಾಲ್ಗೊಳ್ಳಲು ಉತ್ತೇಜಿಸುವುದು.
4.ಜಿಲ್ಲಾ ಮಟ್ಟದಲ್ಲಿ ಸಹಕಾರ ಸಂಘಗಳಿಗೆ ಪೂರಕವಾಗುವಂತೆ ಸಮಗ್ರ ಅಭಿವೃದ್ದಿಯ ಮೂಲಕ ಮೂಲಭೂತ ಸೌಕರ್ಯಗಳು ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು.
5.ಕಾರ್ಯ ಸಮರ್ಥ ತೆ ಸುಧಾರಿಸಲು ಕಛೇರಿ ನಿರ್ವಹಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು.

ಸಹಕಾರ ಇಲಾಖೆಯಿಂದ ನಿರ್ವಹಿಸುವ ಶಾಸನಾತ್ಮಕ ಮತ್ತು ಆರೆ ನ್ಯಾಯಾಂಗದ ಪ್ರಕಾರ್ಯಗಳು.

  1. ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960.
  2. ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಮತ್ತು ಕರ್ನಾಟಕ ಲೇವಾದೇವಿಗಾರರ ನಿಯಮಗಳು 1965.
  3. ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ನಿಯಮಗಳು 1966.
  4. 1982 ರ ಚೀಟಿ ನಿಧಿಗಳ ಅಧಿನಿಯಮ ಮತ್ತು ಚೀಟಿನಿಧಿಗಳ(ಕರ್ನಾಟಕ) ನಿಯಮಾವಳಿ 1983.
  5. ಕರ್ನಾಟಕ ಋಣ ಪರಿಹಾರ ಅಧಿನಿಯಮ 1980.
  6. ಕರ್ನಾಟಕ ಪಬ್ಲಿಕ್ ಮನಿ (ರಿಕವರಿ ಆಫ್ ಡ್ಯೂಸ್) ಅಧಿನಿಯಮ 1980.
    
  7. ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಷನ್ಸ್ ಮತ್ತು ಮಿಸಲೇನಿಯಸ್ ಪ್ರಾವಿಷನ್ಸ್ ಕಾಯಿದೆ 1974.
  8. ಕರ್ನಾಟಕ ಸೌಹಾರ್ಧ ಸಹಕಾರಿ ಅಧಿನಿಯಮ 1997 ಮತ್ತು ಕರ್ನಾಟಕ ಸೌಹರ್ಧ ಸಹಕಾರಿ ನಿಯಮಗಳ 2004.
  9. ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004.
  10. ಬಹು ರಾಜ್ಯಗಳ ಸಹಕಾರ ಕಾಯ್ದೆ ( ಭಾಗಶಃ).

 

ಇಲಾಖೆಯ ಆಡಳಿತಾತ್ಮಕ ರಚನೆ

     ಸರ್ಕಾರದ ಮಟ್ಟದಲ್ಲಿ ಸಹಕಾರ ಇಲಾಖೆಯು ಇಂದು ಸಚಿವಾಲಯವನ್ನು ಹೊಂದಿದ್ದು ರಾಜ್ಯ ಪ್ರಾಂತ, ಜಿಲ್ಲೆ ಉಪ ವಿಭಾಗ ಮತ್ತು ತಾಲ್ಲೂಕು ಮಟ್ಟಗಳನ್ನು ಒಳಗೊಂಡ ಐದು ಹಂತದ ಕ್ಷೇತ್ರ ಇಲಾಖೆಯನ್ನು ಒಳಗೊಂಡಿದೆ . ಸಹಕಾರ ಇಲಾಖೆಯ ಕ್ಷೇತ್ರಾಧಿಕಾರಿಗಳು ಪ್ರಾಂತೀಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಕಾರ ಸಂಘಗಳ ವ್ಯವಹಾರಗಳನ್ನು ನಿಯಂತ್ರಿಸುವುದಷ್ಟೇ ಅಲ್ಲದೆ ಇಲಾಖೆಯ ಕಾರ್ಯಕ್ರಮಗಳನ್ನು ಮತ್ತು ಯೋಕನೆಗಳನ್ನು ಕಾರ್ಯಗೊಳಿಸುತ್ತಾರೆ.

ಇತ್ತೀಚಿನ ನವೀಕರಣ​ : 24-04-2024 05:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080