ಅಭಿಪ್ರಾಯ / ಸಲಹೆಗಳು

ಕರ್ನಾಟಕದಲ್ಲಿ ಸಹಕಾರ ಚಳುವಳಿ

 ನಮ್ಮ ದೇಶದ ಮೊದಲ ಸಹಕಾರ ಸಂಘ ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ, 1905 ರಲ್ಲಿ ನೋಂದಾಯಿಲ್ಪಟ್ಟಿದೆ. ಶ್ರೀ ಸಿದ್ದನಗೌಡ ಸಣ್ಣರಾಮನಗೌಡ, ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಮತ್ತು ಇವರನ್ನು ನಮ್ಮ ದೇಶದ ಸಹಕಾರ ಚಳುವಳಿಯ ಪ್ರವರ್ತಕರು ಎಂದು ಪರಿಗಣಿಸಲಾಗುತ್ತದೆ.

 

ಸಹಕಾರ ಸಂಘಗಳಿ ಸಂಬಂಧಿಸಿದಂತೆ, ಮೈಸೂರು ಸಹಕಾರ ಸಂಘಗಳ ಕಾಯಿದೆ 1959 ನಮ್ಮ ರಾಜ್ಯದ ಮೊದಲ ಶಾಸನ ಮತ್ತು 25-05-1960 ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ..

  ಕರ್ನಾಟಕ, ಭಾರತದ ಸಹಕಾರ ಚಳುವಳಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ, <ಪ> ಕರ್ನಾಟಕ ಸಹಕಾರವು ಕೃಷಿ ಸಾಲವನ್ನು ಒಂದು ಲಕ್ಷದವರೆಗೆ ಶೇ. 0 ಮತ್ತು ಒಂದು ಲಕ್ಷದಿಂದ 3 ಲಕ್ಷದವರೆಗೆ ಶೇ. 1 ಮತ್ತು 3ಲಕ್ಷದ ಮೇಲ್ಪಟ್ಟು ಶೇ. 3ರ ಬಡ್ಡಿ ದರದಲ್ಲಿ ವಿತರಿಸಲಾಗುತ್ತದೆ.

 ಸ್ವಸಹಾಯ ಗುಂಪುಗಳು ಸಹಕಾರ ಸಂಘಗಳ ಮುಖಾಂತರ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ, ಸರ್ಕಾರವು ಸಹಕಾರ ಸಂಘಗಳಿಗೆ ಇಂಟರ್ – ಸಬ್ಸಿಡಿಯನ್ನು ನೀಡುತ್ತದೆ.

  ಮಾರ್ಚ್ 2008 ರಲ್ಲಿ ಭಾರತ ಸರ್ಕಾರವು, ನಬಾರ್ಡ್ ಮತ್ತು ರಾಜ್ಯ ಸರ್ಕಾರದ ಜೊತೆ MOU ಮೂಲಕ ಪ್ರೋ.ವೈದ್ಯನಾಥನ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದ ನಂತರ, ಕೃಷಿ ಸಾಲದ ರಚನೆ ಮತ್ತು ಸಹಕಾರ ಸಂಸ್ಥೆಗಳ ವಿಷಯದಲ್ಲಿ ರಾಜ್ಯ ಸರ್ಕಾರದ ಪಾತ್ರವು ನಿಯಂತ್ರಕ, ಮೇಲ್ವಿಚಾರಕ ದಿಂದ ಗೆಳೆಯ, ತತ್ವಜ್ಞಾನಿ ಮತ್ತು ಗೈಡ್ ಆಗಿ ಕಾಯ೵ನಿವ೵ಹಿಸುತ್ತಿದೆ.

  ರಾಜ್ಯದಲ್ಲಿ ಸಹಕಾರ ವಲಯದ ಬೆಳವಣಿಗೆಯು ಮುಂಬರುವ ವರ್ಷಗಳಲ್ಲಿ ವೃತ್ತಿಪರವಾಗಿ, ಸ್ವತಂತ್ರ ನಿರ್ಧಾರ ತೆಗೆದುಕೊಂಡು ಕಾಯ೵ನಿವ೵ಹಿಸುವ ನಿಟ್ಟಿನಲ್ಲಿ ಭರವಸೆಯನ್ನು ತೋರಿಸುತ್ತಿವೆ.

 ಸಹಕಾರ ಚಳವಳಿಯ ಕ್ರೆಡಿಟ್, ಮಾರ್ಕೆಟಿಂಗ್, ಗ್ರಾಹಕರು, ರೇಷ್ಮೆ ಇಂಡಸ್ಟ್ರಿ, ಡೈರಿ, ಮೀನುಗಾರಿಕೆ, ತೋಟಗಾರಿಕೆ, ಸಕ್ಕರೆ, ಹೌಸ್ ಬಿಲ್ಡಿಂಗ್, ಗೋದಾಮು ಆಫ್ ಕನ್ಸ್ಟ್ರಕ್ಷನ್ಸ್ ನಂತಹ ಎಲ್ಲಾ ಬೆಳವಣಿಗೆಯ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹರಡಿವೆ.

ಸಹಕಾರ ಸಂಸ್ಥೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ, ದೇಶದ ಸಾಮಾಜಿಕ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಹಕಾರ ಸಂಸ್ಥೆಗಳು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಮತ್ತು ಜಾಗತೀಕರಣದ ಉದಾರೀಕರಣ, ಬದಲಾಗುತ್ತಿರುವ ಆರ್ಥಿಕ ಪರಿಸರದಲ್ಲಿ ಹೆಚ್ಚು ಸೂಕ್ತ ಎಂಬುದು ನಮ್ಮ ನಂಬಿಕೆ.

ಇತ್ತೀಚಿನ ನವೀಕರಣ​ : 16-08-2021 05:14 PM ಅನುಮೋದಕರು: Ashwini-ARCS


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಹಕಾರ ಸಿಂಧು - ಸಹಕಾರ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080